¡Sorpréndeme!

ನಿಶ್ಚಿತಾರ್ಥದ ನಂತರ ಮೇಘನಾ ರಾಜ್ ಹೊಸ ಸಿನಿಮಾ ಶುರು | Filmibeat Kannada

2017-10-24 531 Dailymotion

ಕೆಲ ದಿನಗಳ ಹಿಂದೆಯಷ್ಟೇ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ನಡೆದಿತ್ತು. ಆದರ ಹಿಂದೆಯೇ ಈಗ ಮೇಘನಾ ಅವರ ಹೊಸ ಸಿನಿಮಾವೊಂದು ಶುರು ಆಗಿದೆ. ಈ ಬಾರಿ ವಿಭಿನ್ನ ಕಥೆಯ ಚಿತ್ರದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದಾರೆ. 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಎನ್ನುವ ಹೊಸ ಚಿತ್ರದಲ್ಲಿ ಮೇಘನಾ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಮೇಘನಾ ಅವರ ನಿಶ್ಚಿತಾರ್ಥದ ದಿನವೇ ಈ ಚಿತ್ರದ ಮುಹೂರ್ತ ನಡೆದಿದೆ.ಅಂದಹಾಗೆ, ಈ ಹಿಂದೆ 'ಜಲ್ಸಾ' ಚಿತ್ರವನ್ನು ನಿರ್ದೇಶನ ಮಾಡಿದ್ದ ಕಾಂತ ಕನ್ನಲ್ಲಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಂಬಂದಗಳ ಸುತ್ತ ಈ ಚಿತ್ರ ಸುತ್ತಲಿದ್ದು, ವಾಸ್ತವಕ್ಕೆ ತುಂಬ ಹತ್ತಿರವಾಗುವ ವಿಷಯ ಚಿತ್ರದಲ್ಲಿದೆಯಂತೆ. ಇನ್ನು ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.
Actress Meghana Raj next movie titled as 'Iruvudellava Bittu Iruve Bittukolluvude Jeevana'